06/09/2025
🔟 #ವರ್ಷದ_ವಿವಾಹ_ದಿನದ_ಶುಭಾಷಯಗಳು Arpitha CharanGowda
💐💐💐💛❤️
ಹೀಗೆ ದಶಕದ ಹಿಂದಿನ ಸೆಪ್ಟೆಂಬರ್ ತಿಗಳಲ್ಲಿ ಮೆಹಂದಿ ಬಳೇಶಾಸ್ತ್ರ ಚಪ್ಪರ ಅನೇಕ ಸಂಪ್ರದಾಯ ಶಾಸ್ತ್ರ ಮುಗಿಸಿ ಸೆ 5/6 ಶಿಕ್ಷಕರ ದಿನದ ರಜೆಯ ದಿನದಂದು ಆರತಕ್ಷತೆ ಕಳೆದ ಅರ್ಧ ರಾತ್ರಿ ಹೊತ್ತಲ್ಲಿ ಕೈ ಮೈ ಗಳಿಗೆ ಹರಿಶಿಣ ಹಚ್ಚಿಕೊಂಡು ರಂಗಾದ ನಾವಿಬ್ಬರೂ ಮರು ದಿನದ ಮುಂಜಾನೆ ಮಾಂಗಲ್ಯ ಧಾರಣೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಮಗೆ ಒಬ್ಬರನ್ನೊಬ್ಬರು ಅರಿಯಲು ವರ್ಷ ಸಾಕಿತ್ತು. 2ನೇವರ್ಷಕ್ಕೆ ಆಧ್ಯ ಮಗಳು 7ನೇ ವರ್ಷಕ್ಕೆ ಮಗ ಅನ್ವಿತ್ ಇವಳು ಕೊಟ್ಟ ಅತಿ ದೊಡ್ಡ ಗಿಫ್ಟ್! ನನ್ನೂರಿನ ದೇವ ಮೂಲೆಯ ದಿಕ್ಕಿನಿಂದ ಧಾವಿಸಿದ ಅರ್ಪಿತ ಅಡುಗೆಯೊಂದಿಗೆ ಬದುಕಿನ ಹದ ಕಲಿತು ನನಗೂ ಕಲಿಸಿ ಜೀವನೋತ್ಸಾಹ ತುಂಬಿ ನಿತ್ಯವೂ ಹೊಸ ಹುರುಪಿನ ದಿನಗಳಿಗೆ ಜೊತೆಯಾಗಿ ನಿಂತು ಹತ್ತು ವರ್ಷ ಕಳೆದಿವೆ. ನನ್ನ ವಿರಾಟ ರೂಪಗಳೆಲ್ಲ ಇವಳ ಸಹನೆಯ ಮುಂದೆ ಮಂಡಿಯೂರಿದೆ, ಪರಸ್ಪರ ಗೌರವ ,ಅಭಿಮಾನವೆ ಬದುಕಿನ ದೊಡ್ಡ ಗೆಲವು ಅನ್ನೊ ಸತ್ಯ ನಾಜೂಕಾಗಿ ತಿಳಿಸಿದ್ದಾಳೆ. ಶಿಕ್ಷಕರ ದಿನದಂದು ಬಾಳಿಗೆ ಆಗಮಿಸಿದ ಬಂದ ಅರ್ಪಿತಾ ಬದುಕಿಗೆ ಗುರುವಾಗಿ ನಿಂತಿದ್ದಾಳೆ....
ಇದರ ನೆಪದಲ್ಲಿ ನೆನ್ನೆ ರಾತ್ರಿ ಕುಟುಂಬ ದೊಂದಿಗೆ ಕಳೆದ ಅದ್ಬುತ ಕ್ಷಣವು ಮತ್ತಲವು ದಶಕದ ಹಾದಿಯ ಬದುಕಿನ ತವಕ ಹುಟ್ಟಿಸಿದೆ...
ವಿವಾಹ ವಾರ್ಷಿಕೋತ್ಸವದ ದಿನದ ಶುಭಾಶಯಗಳು ಅರ್ಪಿತ 💐💐💐
#ಶುಭಾಶಯಗಳು #ಹ್ಯಾಪಿ